ಅಕ್ರಮ ಒಣ ಗಾಂಜಾ ಸೊಪ್ಪು ಮಾರಾಟ - ಮೂವರ ಬಂಧನ

ಅಕ್ರಮ ಒಣ ಗಾಂಜಾ ಸೊಪ್ಪು ಮಾರಾಟ - ಮೂವರ ಬಂಧನ

ಮಧುಗಿರಿ - ಅಕ್ರಮವಾಗಿ ಒಣ ಗಾಂಜಾ ಸೊಪ್ಪು ಮಾರಾಟ ಮಾಡುವ ವೇಳೆ ಮಧುಗಿರಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿ ಪ್ರತ್ಯೇಕ 2 ಪ್ರಕರಣಗಳಲ್ಲಿ ಸುಮಾರು 160 ಗ್ರಾಂ ಗಾಂಜಾ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 


ಖಚಿತ ಮಾಹಿತಿ ಮೇರೆಗೆ ಸತತ 3 ದಿನಗಳ ಕಾಲ ಪ್ರಯತ್ನ ನಡೆಸಿ ಬುಧವಾರ ರಾತ್ರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗೇಟ್  ಹಾಗೂ ಹನುಮಂತ ಪುರ ಕ್ರಾಸ್ ಬಳಿ ದಾಳಿ ಅಬಕಾರಿ ಡಿ ವೈ ಎಸ್ ಪಿ ದೀಪಕ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಲೋಕೇಶ್,  ನರಸಿಂಹರಾಜು ಹಾಗೂ ಹೇಮಂತ್ ಎಂಬುವವರನ್ನು ಬಂಧಿಸಿ ಸುಮಾರು 160 ಗ್ರಾಂ ಗಾಂಜಾ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 


ಗಡಿ ಭಾಗದಲ್ಲಿ ಹೆಚ್ಚಿದ ಗಾಂಜಾ ಮಾರಾಟ ದಂಧೆ 


ತಾಲೂಕಿನ ಗಡಿ ಭಾಗ ಮೀಡಿಗೇಶಿ ಹೋಬಳಿಯಲ್ಲಿ ಇತ್ತೀಚೆಗೆ ಗಾಂಜಾ ಮಾರಾಟ ಹೆಚ್ಚಾಗಿದೆ. ಆಂಧ್ರ ಮೂಲದ ಕೆಲವರು ಅಕ್ರಮವಾಗಿ ಒಣ ಗಾಂಜಾ ಮಾರುತಿದ್ದು, ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಲಂಕೇ ಹನುಮಯ್ಯ, ಮನು,  ಉಪ ನಿರೀಕ್ಷಕ ಲೋಕೇಶ್,  ಸಿಬ್ಬಂದಿಗಳಾದ ಹಮೀದ್,ಜಗದೀಶ್ ,ರಮೇಶ್, ಆದಿಕುಮಾರ್, ಮಾರುತಿ ಹಾಗೂ ನವೀನ್ ಭಾಗವಹಿಸಿದ್ದರು.